Amazon Primeನಲ್ಲಿ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ `ಸ್ಪಾರ್ಕ್ ಲೈಫ್` ಸ್ಟ್ರೀಮಿಂಗ್..ಕನ್ನಡದಲ್ಲಿಯೂ ವೀಕ್ಷಿಸಬಹುದು ಸಿನಿಮಾ
Posted date: 25 Mon, Dec 2023 10:54:23 AM
ಯುವ ನಾಯಕ ವಿಕ್ರಾಂತ್, ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಸಾರ್ ಧಿಲ್ಲೋನ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ `ಸ್ಪಾರ್ಕ್ L.I.F.E` ನವೆಂಬರ್ 17ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. `ಸ್ಪಾರ್ಕ್ L.I.F.E` ಮೂಲಕ ವಿಕ್ರಾಂತ್ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದರು. ಜೊತೆಗೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಸಹ ಬರೆದಿದ್ದರು. ಇದೀಗ `ಸ್ಪಾರ್ಕ್ L.I.F.E` ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗಿದೆ. ತೆಲುಗು ಜೊತೆ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲಿ ಚಿತ್ರ ಅಮೇಜಾನ್ ಒಟಿಟಿಯಲ್ಲಿ ಲಭ್ಯವಿದೆ. 

ಡೆಫ್ ಫ್ರಾಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ `ಹೃದಯಂ` ಮತ್ತು ಕುಶಿ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಖಳನಾಯಕನಾಗಿ ನಟಿಸಿದ್ದಾರೆ.  ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ `ಸ್ಪಾರ್ಕ್ L.I.F.E` ಚಿತ್ರದಲ್ಲಿ ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆಲ ಕಿಶೋರ್, ಸತ್ಯ, ಬ್ರಹ್ಮಾಜಿ, ಶ್ರೀಕಾಂತ್ ಅಯ್ಯಂಗಾರ್, ಅನ್ನಪೂರ್ಣಮ್ಮ, ಚಮ್ಮಕ್ ಚಂದ್ರ, ರಾಜಾ ರವೀಂದ್ರ ಮುಂತಾದವರಿದ್ದಾರೆ. ಥಿಯೇಟರ್ ನಲ್ಲಿ `ಸ್ಪಾರ್ಕ್ L.I.F.E` ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed